1ದೇವರು ಎದ್ದೇಳುವಾಗ, ಆತನನ್ನು ಹಗೆ ಮಾಡುವವರು ಚದುರಿಸಲ್ಪಡಲಿ; ಆತ ನನ್ನು ವಿರೋಧಿಸುವವರು ಆತನ ಸಮ್ಮುಖದಿಂದ ಓಡಿ ಹೋಗುತ್ತಾರೆ.
2ಹೊಗೆ ಹಾರಿಹೋಗುವ ಮೇರೆಗೆ ಅವರನ್ನು ಓಡಿಸಿಬಿಡು; ಮೇಣವು ಬೆಂಕಿಯ ಮುಂದೆ ಕರಗುವ ಹಾಗೆ ದುಷ್ಟರು ದೇವರ ಮುಂದೆ ನಾಶ ವಾಗಲಿ.
3ಆದರೆ ನೀತಿವಂತರು ಸಂತೋಷಿಸಲಿ; ದೇವರ ಮುಂದೆ ಉತ್ಸಾಹಪಡಲಿ; ಹೌದು, ಅವರು ಅತಿಸಂತೋಷದಿಂದ ಹರ್ಷಿಸುವವರಾಗಲಿ.