13ನೀವು ಮಡಿಕೆ ಗಳ ಮಧ್ಯದಲ್ಲಿ ಮಲಗಿದಾಗ್ಯೂ ಬೆಳ್ಳಿಯಿಂದಲೂ ಅದರ ರೆಕ್ಕೆಗಳು ಹಳದಿ ಚಿನ್ನದಿಂದಲೂ ಮುಚ್ಚಿದ ಪಾರಿವಾಳದ ರೆಕ್ಕೆಗಳ ಹಾಗಿದ್ದೀರಿ.
14ಸರ್ವಶಕ್ತನು ಅರಸುಗಳನ್ನು ಸಲ್ಮೋನಿನಲ್ಲಿ ಚದರಿಸಿದಾಗ ಅದರಲ್ಲಿ ಬಿಳೀ ಹಿಮದ ಹಾಗಿತ್ತು.
15ಬಾಷಾನ್ ಬೆಟ್ಟವು ದೇವರ ಬೆಟ್ಟದಂತೆ ಇದೆ; ಬಾಷಾನ್ ಬೆಟ್ಟವು ಉನ್ನತ ಬೆಟ್ಟವಾಗಿದೆ.
16ಉನ್ನತ ಬೆಟ್ಟಗಳೇ, ಯಾಕೆ ನೆಗೆಯುತ್ತೀರಿ? ದೇವರು ನಿವಾಸ ಕ್ಕಾಗಿ ಅಪೇಕ್ಷಿಸುವ ಬೆಟ್ಟವು ಇದೇ ಹೌದು, ಕರ್ತನು ಅದರಲ್ಲಿ ಸದಾಕಾಲಕ್ಕೆ ವಾಸಿಸುವನು.
17ದೇವರ ರಥಗಳು ಇಪ್ಪತ್ತು ಸಾವಿರವು, ಸಾವಿರಾರು ದೂತರು ಗಳು; ಕರ್ತನು ಸೀನಾಯಿಯಲ್ಲಿ ಇದ್ದ ಹಾಗೆ ಅವರೊಳಗೆ ಪರಿಶುದ್ಧ ಸ್ಥಳದಲ್ಲಿ ಇದ್ದಾನೆ.