ಸ್ತುತಿಗಳು 86

ಆದರೆ ನೀನು ಓ ಕರ್ತನೇ, ಅಂತಃಕರುಣೆಯೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಕೃಪೆಯೂ ಸತ್ಯವೂ ಉಳ್ಳವನೂ ಆಗಿದ್ದೀ.

Psalm 86:15 (UKJV) But you, O Lord, are a God full of compassion, and gracious, long suffering, and abundant in mercy and truth.

13ನಿನ್ನ ಕರುಣೆಯು ನನ್ನ ಮೇಲೆ ದೊಡ್ಡದಾಗಿದೆ; ಪಾತಾಳ ದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀ.

14ಓ ದೇವರೇ, ಅಹಂಕಾರಿಗಳು ನನಗೆ ವಿರೋಧ ವಾಗಿ ಎದ್ದಿದ್ದಾರೆ; ಬಲಿಷ್ಠರ ಕೂಟವು ನನ್ನ ಪ್ರಾಣ ವನ್ನು ಹುಡುಕುತ್ತದೆ; ಅವರು ನಿನ್ನನ್ನು ಲಕ್ಷಿಸಲಿಲ್ಲ.

15ಆದರೆ ನೀನು ಓ ಕರ್ತನೇ, ಅಂತಃಕರುಣೆಯೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಕೃಪೆಯೂ ಸತ್ಯವೂ ಉಳ್ಳವನೂ ಆಗಿದ್ದೀ.

16ನನ್ನ ಕಡೆಗೆ ತಿರಿಗಿಕೊಂಡು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ನಿನ್ನ ಬಲವನ್ನು ಕೊಡು; ನಿನ್ನ ದಾಸಿಯ ಮಗನನ್ನು ರಕ್ಷಿಸು.

17ಒಳ್ಳೇದಕ್ಕಾಗಿ ನನಗೆ ಒಂದು ಗುರುತು ಕೊಡು; ಆಗ ನನ್ನ ಹಗೆಮಾಡುವವರು ನೋಡಿ, ನಾಚಿಕೆಪಡುವರು; ಕರ್ತನೇ, ನೀನು ನನಗೆ ಸಹಾಯ ಮಾಡಿ ನನ್ನನ್ನು ಆದರಿಸಿದ್ದೀ.

Kannada Bible (Old Version), Bible Society of India.