ಸ್ತುತಿಗಳು 9

ನಿನ್ನ ಹೆಸರನ್ನು ತಿಳಿದವರು ನಿನ್ನಲ್ಲಿ ಭರವಸೆ ಇಡು ವರು; ಓ ಕರ್ತನೇ, ನಿನ್ನನ್ನು ಹುಡುಕುವವರನ್ನು ನೀನು ತೊರೆದುಬಿಡಲಿಲ್ಲ.

Psalm 9:10 (UKJV) And they that know your name will put their trust in you: for you, LORD, have not forsaken them that seek you.

8ಆತನೇ ನೀತಿಯಿಂದ ಲೋಕಕ್ಕೆ ನ್ಯಾಯತೀರಿಸುವನು; ಆತನು ಪ್ರಜೆಗಳಿಗೆ ಯಥಾರ್ಥವಾಗಿ ನ್ಯಾಯತೀರ್ಪು ಕೊಡುವನು.

9ಕರ್ತನು ಕುಗ್ಗಿದವರಿಗೆ ಆಶ್ರಯವಾಗಿರುವನು, ಇಕ್ಕಟ್ಟಿನ ಸಮಯದಲ್ಲಿ ಸಹ ಆಶ್ರಯವಾಗಿರುವನು.

10ನಿನ್ನ ಹೆಸರನ್ನು ತಿಳಿದವರು ನಿನ್ನಲ್ಲಿ ಭರವಸೆ ಇಡು ವರು; ಓ ಕರ್ತನೇ, ನಿನ್ನನ್ನು ಹುಡುಕುವವರನ್ನು ನೀನು ತೊರೆದುಬಿಡಲಿಲ್ಲ.

11ಚೀಯೋನಿನಲ್ಲಿ ವಾಸಿಸುವ ಕರ್ತನನ್ನು ಕೀರ್ತಿಸಿರಿ; ಆತನ ಕ್ರಿಯೆಗಳನ್ನು ಜನಗಳಲ್ಲಿ ತಿಳಿಸಿರಿ.

12ಆತನು ರಕ್ತಾಪರಾಧವನ್ನು ವಿಚಾರಿಸುವಾಗ ಅವರನ್ನು ಜ್ಞಾಪಕಮಾಡಿಕೊಳ್ಳುವನು; ಆತನು ದೀನರ ಕೂಗನ್ನು ಮರೆತುಬಿಡನು.

Kannada Bible (Old Version), Bible Society of India.