ಸ್ತುತಿಗಳು 9

ಆತನು ರಕ್ತಾಪರಾಧವನ್ನು ವಿಚಾರಿಸುವಾಗ ಅವರನ್ನು ಜ್ಞಾಪಕಮಾಡಿಕೊಳ್ಳುವನು; ಆತನು ದೀನರ ಕೂಗನ್ನು ಮರೆತುಬಿಡನು.

Psalm 9:12 (UKJV) When he makes inquisition for blood, he remembers them: he forgets not the cry of the humble.

10ನಿನ್ನ ಹೆಸರನ್ನು ತಿಳಿದವರು ನಿನ್ನಲ್ಲಿ ಭರವಸೆ ಇಡು ವರು; ಓ ಕರ್ತನೇ, ನಿನ್ನನ್ನು ಹುಡುಕುವವರನ್ನು ನೀನು ತೊರೆದುಬಿಡಲಿಲ್ಲ.

11ಚೀಯೋನಿನಲ್ಲಿ ವಾಸಿಸುವ ಕರ್ತನನ್ನು ಕೀರ್ತಿಸಿರಿ; ಆತನ ಕ್ರಿಯೆಗಳನ್ನು ಜನಗಳಲ್ಲಿ ತಿಳಿಸಿರಿ.

12ಆತನು ರಕ್ತಾಪರಾಧವನ್ನು ವಿಚಾರಿಸುವಾಗ ಅವರನ್ನು ಜ್ಞಾಪಕಮಾಡಿಕೊಳ್ಳುವನು; ಆತನು ದೀನರ ಕೂಗನ್ನು ಮರೆತುಬಿಡನು.

13ಓ ಕರ್ತನೇ, ನನ್ನ ಮೇಲೆ ಕರುಣೆತೋರಿಸು; ನನ್ನನ್ನು ಹಗೆಮಾಡುವವರಿಂದ ನನಗೆ ಬಂದ ಶ್ರಮೆ ಯನ್ನು ನೋಡು. ಮರಣದ ಬಾಗಲುಗಳಿಂದ ನನ್ನನ್ನು ಎತ್ತುವಾತನೇ,

14ನಾನು ನಿನ್ನ ಸ್ತುತಿಯನ್ನೆಲ್ಲಾ ಚೀಯೋನಿನ ಮಗಳ ಬಾಗಲುಗಳಲ್ಲಿ ಸಾರುವಹಾಗೆ ನಿನ್ನ ರಕ್ಷಣೆಯಲ್ಲಿ ಉಲ್ಲಾಸಪಡುವೆನು.

Kannada Bible (Old Version), Bible Society of India.