ಸ್ತುತಿಗಳು 92

ಹತ್ತು ತಂತಿ ವೀಣೆ ಯಿಂದಲೂ ವಾದ್ಯದಿಂದಲೂ ಕಿನ್ನರಿಯ ಘನ ಸ್ವರ ದಿಂದಲೂ ತಿಳಿಸುವದು ಒಳ್ಳೇದು.

Psalm 92:3 (UKJV) Upon an instrument of ten strings, and upon the psaltery; upon the harp with a solemn sound.

1ಕರ್ತನನ್ನು ಕೊಂಡಾಡುವದೂ; ಮಹೋನ್ನತನೇ, ನಿನ್ನ ಹೆಸರನ್ನು ಕೀರ್ತಿಸುವದೂ

2ಬೆಳಿಗ್ಗೆ ನಿನ್ನ ಪ್ರೀತಿ ಕರುಣೆಯನ್ನೂ ಪ್ರತಿ ರಾತ್ರಿ ಯಲ್ಲಿ ನಿನ್ನ ನಂಬಿಗಸ್ತಿಕೆಯನ್ನೂ

3ಹತ್ತು ತಂತಿ ವೀಣೆ ಯಿಂದಲೂ ವಾದ್ಯದಿಂದಲೂ ಕಿನ್ನರಿಯ ಘನ ಸ್ವರ ದಿಂದಲೂ ತಿಳಿಸುವದು ಒಳ್ಳೇದು.

4ಕರ್ತನೇ, ನಿನ್ನ ಕ್ರಿಯೆಯಿಂದ ನನ್ನನ್ನು ಸಂತೋಷ ಪಡಿಸಿದ್ದೀ. ನಿನ್ನ ಕೈಕೆಲಸಗಳಲ್ಲಿ ನಾನು ಜಯ ಧ್ವನಿಗೈಯುತ್ತೇನೆ.

5ಕರ್ತನೇ, ನಿನ್ನ ಕೆಲಸಗಳು ಎಷ್ಟೋ ದೊಡ್ಡವು! ನಿನ್ನ ಯೋಚನೆಗಳು ಬಹಳ ಆಳವಾಗಿವೆ.

Kannada Bible (Old Version), Bible Society of India.