ಸ್ತುತಿಗಳು 96

ಕರ್ತನಿಗೆ, ಆತನ ಹೆಸರಿಗೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಕಾಣಿಕೆ ತೆಗೆದುಕೊಂಡು ಆತನ ಅಂಗಳಗಳಿಗೆ ಬನ್ನಿರಿ.

Psalm 96:8 (UKJV) Give unto the LORD the glory due unto his name: bring an offering, and come into his courts.

6ಘನವೂ ಪ್ರಭೆಯೂ ಆತನ ಮುಂದೆ ಅವೆ; ಬಲವೂ ಸೌಂದರ್ಯವೂ ಆತನ ಪರಿಶುದ್ಧ ಸ್ಥಳದಲ್ಲಿ ಅವೆ.

7ಓ ಜನಾಂಗಗಳೇ, ಕರ್ತನಿಗೆ ನೀವು ಘನವನ್ನೂ ಬಲವನ್ನೂ ಸಲ್ಲಿಸಿರಿ.

8ಕರ್ತನಿಗೆ, ಆತನ ಹೆಸರಿಗೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಕಾಣಿಕೆ ತೆಗೆದುಕೊಂಡು ಆತನ ಅಂಗಳಗಳಿಗೆ ಬನ್ನಿರಿ.

9ಪರಿಶುದ್ಧತ್ವದ ಸೌಂದರ್ಯದಿಂದ ಕರ್ತನನ್ನು ಆರಾಧಿಸಿರಿ; ಸಮಸ್ತ ಭೂಮಿಯೇ, ಆತನ ಮುಂದೆ ಭಯಪಡು,

10ಕರ್ತನು ಆಳುತ್ತಾನೆ; ಲೋಕವು ಸ್ಥಿರವಾಗಿದೆ, ಕದಲುವದಿಲ್ಲ. ಆತನು ಜನಗಳಿಗೆ ನೀತಿಯಲ್ಲಿ ನ್ಯಾಯತೀರಿಸುವನೆಂದು ಅನ್ಯಜನಾಂಗಗಳಲ್ಲಿ ಹೇಳಿರಿ.

Kannada Bible (Old Version), Bible Society of India.