ರೋಮರಿಗೆ 15

ಆದದರಿಂದ ಬಲವುಳ್ಳವರಾದ ನಾವು ನಮ್ಮನ್ನೇ ಸಂತೋಷಪಡಿಸಿಕೊಳ್ಳದೆ ದುರ್ಬಲರ ಬಲಹೀನತೆಗಳನ್ನು ಸಹಿಸಿಕೊಳ್ಳತಕ್ಕದ್ದು.

Romans 15:1 (UKJV) We then that are strong ought to bear the infirmities of the weak, and not to please ourselves.

1ಆದದರಿಂದ ಬಲವುಳ್ಳವರಾದ ನಾವು ನಮ್ಮನ್ನೇ ಸಂತೋಷಪಡಿಸಿಕೊಳ್ಳದೆ ದುರ್ಬಲರ ಬಲಹೀನತೆಗಳನ್ನು ಸಹಿಸಿಕೊಳ್ಳತಕ್ಕದ್ದು.

2ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಭಕ್ತಿ ವೃದ್ಧಿಯ ಹಿತಕ್ಕಾಗಿ ಅವನನ್ನು ಸಂತೋಷಪಡಿಸಲಿ.

3ಆದರೆ--ನಿನ್ನನ್ನು ದೂಷಿಸುವವರ ದೂಷಣೆಗಳು ನನ್ನ ಮೇಲೆ ಬಿದ್ದವು ಎಂಬದಾಗಿ ಬರೆಯಲ್ಪಟ್ಟಂತೆ ಕ್ರಿಸ್ತ ನಾದರೋ ತನ್ನನ್ನು ತಾನು ಸಂತೋಷಪಡಿಸಿಕೊಳ್ಳಲಿಲ್ಲ.

Kannada Bible (Old Version), Bible Society of India.