2ನನ್ನ ಪ್ರಿಯನು ತೋಟಗಳಲ್ಲಿ ಮೇಯಿಸುವದಕ್ಕೂ ತಾವರೆಗಳನ್ನು ಕೂಡಿಸುವದಕ್ಕೂ ತನ್ನ ತೋಟಕ್ಕೆ ಸುಗಂಧಗಳ ಮಡಿಗೆ ಹೋಗಿದ್ದಾನೆ.
3ನಾನು ನನ್ನ ಪ್ರಿಯನವಳು, ನನ್ನ ಪ್ರಿಯನು ನನ್ನವನು; ಅವನು ತಾವರೆ ಹೂವುಗಳಲ್ಲಿ ಮೇಯಿಸುತ್ತಾನೆ.
4ಓ ನನ್ನ ಪ್ರಿಯಳೇ, ನೀನು ತಿರ್ಚದಂತೆ ಸುಂದ ರಿಯೂ ಯೆರೂಸಲೇಮಿನ ಹಾಗೆ ರಮ್ಯಳೂ ಧ್ವಜ ಗಳಿರುವ ದಂಡಿನ ಹಾಗೆ ಭಯಂಕರಳೂ ಆಗಿದ್ದೀ.
5ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು; ಅವು ನನ್ನನ್ನು ಜೈಸಿದವು. ನಿನ್ನ ಕೂದಲು ಗಿಲ್ಯಾದಿನಿಂದ ಕಾಣಿಸಲ್ಪಡುವ ಮೇಕೆ ಮಂದೆಯ ಹಾಗೆ ಅದೆ.
6ನಿನ್ನ ಹಲ್ಲುಗಳು ತೊಳೆದ ಮೇಲೆ ಏರಿ ಬರುವ ಕುರಿ ಮಂದೆಗೆ ಸಮಾನವಾಗಿವೆ; ಅವೆಲ್ಲಾ ಅವಳಿ ಜವಳಿ ಈಯುತ್ತವೆ; ಅವುಗಳಲ್ಲಿ ಒಂದೂ ಬಂಜೆ ಯಾಗಿರದು.