21ಅವರು ಸುಲುಕೊಂಡ ಪಶುಗಳುಅವರ ಒಂಟೆಗಳು ಐವತ್ತು ಸಾವಿರ, ಕುರಿಗಳು ಎರಡು ವರೆ ಲಕ್ಷ, ಕತ್ತೆಗಳು ಎರಡು ಸಾವಿರ, ಮನುಷ್ಯರು ಒಂದುಲಕ್ಷ ಮಂದಿ.
22ಯುದ್ಧವು ದೇವರಿಂದ ಉಂಟಾದ ಕಾರಣ ಅನೇಕ ಜನರು ಕೊಲ್ಲಲ್ಪಟ್ಟು ಬಿದ್ದುಹೋದರು. ಇವರು ಸೆರೆಒಯ್ಯಲ್ಪಡುವವರೆಗೂ ಅವರ ಸ್ಥಳದಲ್ಲಿ ವಾಸವಾಗಿದ್ದರು.
23ಮನಸ್ಸೆಯ ಅರ್ಧಗೋತ್ರದ ಮಕ್ಕಳು ದೇಶ ದಲ್ಲಿ ವಾಸಮಾಡಿ ಬಾಷಾನ್ ಮೊದಲುಗೊಂಡು ಬಾಳ್‌ಹೆರ್ಮೋನು ಸೆನೀರು ಹೆರ್ಮೋನ್ ಬೆಟ್ಟದ ವರೆಗೂ ಹಬ್ಬಿಕೊಂಡರು.
24ಅವರ ಪಿತೃಗಳ ಮನೆ ಯಲ್ಲಿರುವ ಯಜಮಾನರು ಯಾರಂದರೆ--ಏಫೆರನು, ಇಷ್ಷೀಯು, ಎಲೀಯೇಲನು, ಅಜ್ರಿಯೇಲನು, ಯೆರೆ ವಿಾಯನು, ಹೋದವ್ಯನು, ಯೆಹ್ತಿಯೇಲನು. ಇವರು ಪರಾಕ್ರಮಶಾಲಿಗಳಾಗಿಯೂ ಹೆಸರುಗೊಂಡವರಾ ಗಿಯೂ ತಮ್ಮ ಪಿತೃಗಳ ಮನೆಯಲ್ಲಿ ಯಜಮಾನ ರಾಗಿಯೂ ಇದ್ದರು.
25ಆದರೆ ಅವರು ತಮ್ಮ ಪಿತೃಗಳ ದೇವರಿಗೆ ವಿರೋಧವಾಗಿ ಅಪರಾಧಮಾಡಿ ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.