1 ಪೂರ್ವಕಾಲವೃತ್ತಾಂತ 5

ಆದರೆ ಅವರು ತಮ್ಮ ಪಿತೃಗಳ ದೇವರಿಗೆ ವಿರೋಧವಾಗಿ ಅಪರಾಧಮಾಡಿ ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.

1 Chronicles 5:25 (UKJV) And they transgressed against the God of their fathers, and went a whoring after the gods of the people of the land, whom God destroyed before them.

23ಮನಸ್ಸೆಯ ಅರ್ಧಗೋತ್ರದ ಮಕ್ಕಳು ದೇಶ ದಲ್ಲಿ ವಾಸಮಾಡಿ ಬಾಷಾನ್‌ ಮೊದಲುಗೊಂಡು ಬಾಳ್‌ಹೆರ್ಮೋನು ಸೆನೀರು ಹೆರ್ಮೋನ್‌ ಬೆಟ್ಟದ ವರೆಗೂ ಹಬ್ಬಿಕೊಂಡರು.

24ಅವರ ಪಿತೃಗಳ ಮನೆ ಯಲ್ಲಿರುವ ಯಜಮಾನರು ಯಾರಂದರೆ--ಏಫೆರನು, ಇಷ್ಷೀಯು, ಎಲೀಯೇಲನು, ಅಜ್ರಿಯೇಲನು, ಯೆರೆ ವಿಾಯನು, ಹೋದವ್ಯನು, ಯೆಹ್ತಿಯೇಲನು. ಇವರು ಪರಾಕ್ರಮಶಾಲಿಗಳಾಗಿಯೂ ಹೆಸರುಗೊಂಡವರಾ ಗಿಯೂ ತಮ್ಮ ಪಿತೃಗಳ ಮನೆಯಲ್ಲಿ ಯಜಮಾನ ರಾಗಿಯೂ ಇದ್ದರು.

25ಆದರೆ ಅವರು ತಮ್ಮ ಪಿತೃಗಳ ದೇವರಿಗೆ ವಿರೋಧವಾಗಿ ಅಪರಾಧಮಾಡಿ ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.

26ಆದ ಕಾರಣ ಇಸ್ರಾಯೇಲಿನ ದೇವರು ಅಶ್ಯೂರಿನ ಅರಸ ನಾದ ಪೂಲನ ಆತ್ಮವನ್ನೂ ಅಶ್ಯೂರಿನ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರದವರನ್ನೂ ಹಲಹಕ್ಕೂ ಹಾಬೋರಿಗೂ ಹಾರಕ್ಕೂ ಗೋಜಾನ್‌ ನದಿಯ ಪ್ರದೇಶಕ್ಕೂ ತಕ್ಕೊಂಡುಹೋದರು. ಅವರು ಇಂದಿನ ವರೆಗೂ ಅಲ್ಲೇ ಇದ್ದಾರೆ.

Kannada Bible (Old Version), Bible Society of India.