1 ಸಾಮುವೇಲು 27

ದಾವೀ ದನೂ ಅವನ ಜನರೂ ಶೂರಿಗೆ ಹೋಗುವ ಮೇರೆ ಯಿಂದ ಐಗುಪ್ತದ ವರೆಗೂ ಇರುವ ಸೀಮೆಯಲ್ಲಿ ಪೂರ್ವದಿಂದ ವಾಸಿಸಿರುವವರಾದ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಅಮಾಲೇಕ್ಯರ ಮೇಲೆಯೂ ದಂಡೆತ್ತಿ ಹೋದರು.

1 Samuel 27:8 (UKJV) And David and his men went up, and invaded the Geshurites, and the Gezrites, and the Amalekites: for those nations were of old the inhabitants of the land, as you go to Shur, even unto the land of Egypt.

6ಆಗ ಆಕೀಷನು ಆ ದಿವಸದಲ್ಲಿ ಚಿಕ್ಲಗ್‌ ಊರನ್ನು ಅವನಿಗೆ ಕೊಟ್ಟನು. ಆದದರಿಂದ ಚಿಕ್ಲಗ್‌ ಈ ವರೆಗೂ ಯೆಹೂದದ ಅರಸರಿಗೆ ಸೇರಿದೆ.

7ದಾವೀದನು ಫಿಲಿಷ್ಟಿಯರ ದೇಶದಲ್ಲಿ ಒಂದು ವರುಷ ನಾಲ್ಕು ತಿಂಗಳು ವಾಸವಾಗಿದ್ದನು.

8ದಾವೀ ದನೂ ಅವನ ಜನರೂ ಶೂರಿಗೆ ಹೋಗುವ ಮೇರೆ ಯಿಂದ ಐಗುಪ್ತದ ವರೆಗೂ ಇರುವ ಸೀಮೆಯಲ್ಲಿ ಪೂರ್ವದಿಂದ ವಾಸಿಸಿರುವವರಾದ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಅಮಾಲೇಕ್ಯರ ಮೇಲೆಯೂ ದಂಡೆತ್ತಿ ಹೋದರು.

9ಆಗ ದಾವೀದನು ಪುರುಷರನ್ನಾದರೂ ಸ್ತ್ರೀಯರನ್ನಾದರೂ ಉಳಿಸದೆ ಆ ಸೀಮೆಯನ್ನು ಹೊಡೆದು ಕುರಿ ಪಶುಗಳನ್ನೂ ಕತ್ತೆ ಗಳನ್ನೂ ಒಂಟೆಗಳನ್ನೂ ವಸ್ತ್ರಗಳನ್ನೂ ತೆಗೆದುಕೊಂಡು ಆಕೀಷನ ಬಳಿಗೆ ತಿರುಗಿ ಬಂದನು.

10ಆಗ ಆಕೀಷನುಈ ಹೊತ್ತು ಎಲ್ಲಿ ಸುಲುಕೊಂಡಿರಿ ಅಂದಾಗ ದಾವೀದನು--ನಾವು ಯೆಹೂದದ ದಕ್ಷಿಣ ಸೀಮೆಯ ಮೇಲೆಯೂ ಎರಹ್ಮೇಲ್ಯರ ದಕ್ಷಿಣ ಸೀಮೆಯ ಮೇಲೆಯೂ ಕೇನ್ಯರ ದಕ್ಷಿಣ ಸೀಮೆಯ ಮೇಲೆಯೂ ಬಿದ್ದೆವು ಅಂದನು.

Kannada Bible (Old Version), Bible Society of India.