1 ಸಾಮುವೇಲು 27

ಆಗ ದಾವೀದನು ಪುರುಷರನ್ನಾದರೂ ಸ್ತ್ರೀಯರನ್ನಾದರೂ ಉಳಿಸದೆ ಆ ಸೀಮೆಯನ್ನು ಹೊಡೆದು ಕುರಿ ಪಶುಗಳನ್ನೂ ಕತ್ತೆ ಗಳನ್ನೂ ಒಂಟೆಗಳನ್ನೂ ವಸ್ತ್ರಗಳನ್ನೂ ತೆಗೆದುಕೊಂಡು ಆಕೀಷನ ಬಳಿಗೆ ತಿರುಗಿ ಬಂದನು.

1 Samuel 27:9 (UKJV) And David stroke the land, and left neither man nor woman alive, and took away the sheep, and the oxen, and the asses, and the camels, and the apparel, and returned, and came to Achish.

7ದಾವೀದನು ಫಿಲಿಷ್ಟಿಯರ ದೇಶದಲ್ಲಿ ಒಂದು ವರುಷ ನಾಲ್ಕು ತಿಂಗಳು ವಾಸವಾಗಿದ್ದನು.

8ದಾವೀ ದನೂ ಅವನ ಜನರೂ ಶೂರಿಗೆ ಹೋಗುವ ಮೇರೆ ಯಿಂದ ಐಗುಪ್ತದ ವರೆಗೂ ಇರುವ ಸೀಮೆಯಲ್ಲಿ ಪೂರ್ವದಿಂದ ವಾಸಿಸಿರುವವರಾದ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಅಮಾಲೇಕ್ಯರ ಮೇಲೆಯೂ ದಂಡೆತ್ತಿ ಹೋದರು.

9ಆಗ ದಾವೀದನು ಪುರುಷರನ್ನಾದರೂ ಸ್ತ್ರೀಯರನ್ನಾದರೂ ಉಳಿಸದೆ ಆ ಸೀಮೆಯನ್ನು ಹೊಡೆದು ಕುರಿ ಪಶುಗಳನ್ನೂ ಕತ್ತೆ ಗಳನ್ನೂ ಒಂಟೆಗಳನ್ನೂ ವಸ್ತ್ರಗಳನ್ನೂ ತೆಗೆದುಕೊಂಡು ಆಕೀಷನ ಬಳಿಗೆ ತಿರುಗಿ ಬಂದನು.

10ಆಗ ಆಕೀಷನುಈ ಹೊತ್ತು ಎಲ್ಲಿ ಸುಲುಕೊಂಡಿರಿ ಅಂದಾಗ ದಾವೀದನು--ನಾವು ಯೆಹೂದದ ದಕ್ಷಿಣ ಸೀಮೆಯ ಮೇಲೆಯೂ ಎರಹ್ಮೇಲ್ಯರ ದಕ್ಷಿಣ ಸೀಮೆಯ ಮೇಲೆಯೂ ಕೇನ್ಯರ ದಕ್ಷಿಣ ಸೀಮೆಯ ಮೇಲೆಯೂ ಬಿದ್ದೆವು ಅಂದನು.

11ದಾವೀದನು ಹೀಗೇಕೆ ಮಾಡಿದ ನೆಂದೂ ಅವನು ಫಿಲಿಷ್ಟಿಯರ ಸೀಮೆಯಲ್ಲಿ ವಾಸ ವಾಗಿರುವ ದಿನಗಳೆಲ್ಲಾ ಇದು ಅವನ ಮರ್ಯಾದೆ ಎಂದೂ ಅವರು ತನಗೆ ವಿರೋಧವಾಗಿ ಗತ್‌ ಪಟ್ಟಣಕ್ಕೆ ವರ್ತಮಾನವನ್ನು ತಕ್ಕೊಂಡು ಬಾರದ ಹಾಗೆ ಒಬ್ಬ ಪುರುಷನನ್ನಾದರೂ ಸ್ತ್ರೀಯನ್ನಾದರೂ ಬದುಕಗೊಡಿ ಸಲಿಲ್ಲ.

Kannada Bible (Old Version), Bible Society of India.