1 ಸಾಮುವೇಲು 29

ಆದರೆ ಫಿಲಿಷ್ಟಿಯರು ತಮ್ಮ ಎಲ್ಲಾ ಸೈನ್ಯಗಳನ್ನು ಅಫೇಕದಲ್ಲಿ ಕೂಡಿಸಿ ಕೊಂಡರು. ಹಾಗೆಯೇ ಇಸ್ರಾಯೇಲ್ಯರು ಇಜ್ರೇಲ್‌ ನಲ್ಲಿರುವ ಬುಗ್ಗೆಯ ಬಳಿಯಲ್ಲಿ ದಂಡಿಳಿದರು.

1 Samuel 29:1 (UKJV) Now the Philistines gathered together all their armies to Aphek: and the Israelites pitched by a fountain which is in Jezreel.

1ಆದರೆ ಫಿಲಿಷ್ಟಿಯರು ತಮ್ಮ ಎಲ್ಲಾ ಸೈನ್ಯಗಳನ್ನು ಅಫೇಕದಲ್ಲಿ ಕೂಡಿಸಿ ಕೊಂಡರು. ಹಾಗೆಯೇ ಇಸ್ರಾಯೇಲ್ಯರು ಇಜ್ರೇಲ್‌ ನಲ್ಲಿರುವ ಬುಗ್ಗೆಯ ಬಳಿಯಲ್ಲಿ ದಂಡಿಳಿದರು.

2ಫಿಲಿಷ್ಟಿ ಯರ ಅಧಿಪತಿಗಳು ನೂರು ನೂರಾಗಿಯೂ ಸಾವಿರ ಸಾವಿರವಾಗಿಯೂ ನಡೆದು ಬಂದರು; ಆದರೆ ದಾವೀ ದನೂ ಅವನ ಮನುಷ್ಯರೂ ಆಕೀಷನ ಸಂಗಡ ಹಿಂದಿನ ದಂಡಿನಲ್ಲಿ ಬಂದರು.

3ಆಗ ಫಿಲಿಷ್ಟಿಯರ ಅಧಿಪತಿ ಗಳು--ಈ ಇಬ್ರಿಯರು ಯಾಕೆ ಅಂದರು. ಆಕೀಷನು ಫಿಲಿಷ್ಟಿಯರ ಅಧಿಪತಿಗಳಿಗೆ--ಇಸ್ರಾಯೇಲಿನ ಅರಸ ನಾದ ಸೌಲನ ಸೇವಕ ಈ ದಾವೀದನು ಇಷ್ಟು ದಿವಸ ಗಳೂ ಇಷ್ಟು ವರುಷಗಳೂ ನನ್ನ ಸಂಗಡ ಇದ್ದದ್ದಿ ಲ್ಲವೋ? ಇವನು ನಮ್ಮ ಬಳಿಗೆ ಬಂದು ಇದ್ದ ದಿವಸದ ಮೊದಲುಗೊಂಡು ಇಂದಿನ ವರೆಗೂ ನಾನು ಅವ ನಲ್ಲಿ ಒಂದು ಅಪರಾಧವನ್ನಾದರೂ ಕಂಡುಕೊಳ್ಳಲಿಲ್ಲ ಅಂದನು.

Kannada Bible (Old Version), Bible Society of India.