1ಆದರೆ ಫಿಲಿಷ್ಟಿಯರು ತಮ್ಮ ಎಲ್ಲಾ ಸೈನ್ಯಗಳನ್ನು ಅಫೇಕದಲ್ಲಿ ಕೂಡಿಸಿ ಕೊಂಡರು. ಹಾಗೆಯೇ ಇಸ್ರಾಯೇಲ್ಯರು ಇಜ್ರೇಲ್ ನಲ್ಲಿರುವ ಬುಗ್ಗೆಯ ಬಳಿಯಲ್ಲಿ ದಂಡಿಳಿದರು.
2ಫಿಲಿಷ್ಟಿ ಯರ ಅಧಿಪತಿಗಳು ನೂರು ನೂರಾಗಿಯೂ ಸಾವಿರ ಸಾವಿರವಾಗಿಯೂ ನಡೆದು ಬಂದರು; ಆದರೆ ದಾವೀ ದನೂ ಅವನ ಮನುಷ್ಯರೂ ಆಕೀಷನ ಸಂಗಡ ಹಿಂದಿನ ದಂಡಿನಲ್ಲಿ ಬಂದರು.
3ಆಗ ಫಿಲಿಷ್ಟಿಯರ ಅಧಿಪತಿ ಗಳು--ಈ ಇಬ್ರಿಯರು ಯಾಕೆ ಅಂದರು. ಆಕೀಷನು ಫಿಲಿಷ್ಟಿಯರ ಅಧಿಪತಿಗಳಿಗೆ--ಇಸ್ರಾಯೇಲಿನ ಅರಸ ನಾದ ಸೌಲನ ಸೇವಕ ಈ ದಾವೀದನು ಇಷ್ಟು ದಿವಸ ಗಳೂ ಇಷ್ಟು ವರುಷಗಳೂ ನನ್ನ ಸಂಗಡ ಇದ್ದದ್ದಿ ಲ್ಲವೋ? ಇವನು ನಮ್ಮ ಬಳಿಗೆ ಬಂದು ಇದ್ದ ದಿವಸದ ಮೊದಲುಗೊಂಡು ಇಂದಿನ ವರೆಗೂ ನಾನು ಅವ ನಲ್ಲಿ ಒಂದು ಅಪರಾಧವನ್ನಾದರೂ ಕಂಡುಕೊಳ್ಳಲಿಲ್ಲ ಅಂದನು.
4ಆದರೆ ಫಿಲಿಷ್ಟಿಯರ ಅಧಿಪತಿಗಳು ಅವನ ಮೇಲೆ ರೌದ್ರವಾಗಿ ಅವನಿಗೆ--ಇವನು ಯುದ್ಧದಲ್ಲಿ ನಮಗೆ ಶತ್ರುವಾಗಿರದ ಹಾಗೆ ಯುದ್ಧಕ್ಕೆ ನಮ್ಮ ಸಂಗಡ ಇವನನ್ನು ಬರಗೊಡದೆ ನೀನು ಅವನಿಗೆ ನೇಮಿಸಿದ ತನ್ನ ಸ್ಥಳಕ್ಕೆ ತಿರಿಗಿ ಹೋಗುವ ಹಾಗೆ ಅವನನ್ನು ಕಳುಹಿಸಿಬಿಡು. ಇವನು ಯಾತರಿಂದ ತನ್ನ ದೊರೆಗೆ ತನ್ನನ್ನು ಇಷ್ಟನಾಗ ಮಾಡಿಕೊಳ್ಳುವನು. ಅದು ಈ ಮನುಷ್ಯರ ತಲೆಗಳಿಂದಲ್ಲವೇ?