2 ಉತ್ತರಕಾಲವೃತ್ತಾಂತ 23

ಅರಸನ ಸುತ್ತಲೂ ಇರುವದಕ್ಕೆ ಬಲಿಪೀಠಕ್ಕೂ ಆಲಯಕ್ಕೂ ಎದುರಾಗಿ ಆಲಯದ ಬಲಪಾರ್ಶ್ವ ಮೊದಲುಗೊಂಡು ಆಲಯದ ಎಡಪಾರ್ಶ್ವದ ವರೆಗೂ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ತನ್ನ ಆಯುಧ ಹಿಡಿದವರಾಗಿ ಸಮಸ್ತ ಜನರನ್ನೂ ಇರಿಸಿದನು.

2 Chronicles 23:10 (UKJV) And he set all the people, every man having his weapon in his hand, from the right side of the temple to the left side of the temple, along by the altar and the temple, by the king round about.

8ಹೀಗೆಯೇ ಲೇವಿಯರೂ ಸಮಸ್ತ ಯೆಹೂದದವರೂ ಯಾಜಕನಾದ ಯೆಹೋಯಾದನು ಆಜ್ಞಾಪಿಸಿದ ಎಲ್ಲಾ ದರ ಪ್ರಕಾರ ಮಾಡಿ ಪ್ರತಿ ಮನುಷ್ಯನು ಸಬ್ಬತ್ತಿನಲ್ಲಿ ಒಳಗೆ ಬರಬೇಕಾದ ತನ್ನ ಮನುಷ್ಯರನ್ನೂ ಸಬ್ಬತ್ತಿ ನಲ್ಲಿ ಹೊರಟು ಹೋಗಬೇಕಾದವರನ್ನೂ ತೆಗೆದು ಕೊಂಡನು. ಯಾಜಕನಾದ ಯೆಹೋಯಾದನು ಅವ ರನ್ನು ಕಳುಹಿಸಿ ಬಿಡಲಿಲ್ಲ.

9ಇದಲ್ಲದೆ ಯಾಜಕನಾದ ಯೆಹೋಯಾದನು ದೇವರ ಆಲಯದಲ್ಲಿದ್ದ ಅರಸ ನಾದ ದಾವೀದನ ಈಟಿಗಳನ್ನೂ ಗುರಾಣಿಗಳನ್ನೂ ಡಾಲುಗಳನ್ನೂ ಶತಾಧಿಪತಿಗಳಾದವರಿಗೆ ಕೊಟ್ಟು

10ಅರಸನ ಸುತ್ತಲೂ ಇರುವದಕ್ಕೆ ಬಲಿಪೀಠಕ್ಕೂ ಆಲಯಕ್ಕೂ ಎದುರಾಗಿ ಆಲಯದ ಬಲಪಾರ್ಶ್ವ ಮೊದಲುಗೊಂಡು ಆಲಯದ ಎಡಪಾರ್ಶ್ವದ ವರೆಗೂ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ತನ್ನ ಆಯುಧ ಹಿಡಿದವರಾಗಿ ಸಮಸ್ತ ಜನರನ್ನೂ ಇರಿಸಿದನು.

11ಆಗ ಅವರು ಅರಸನ ಮಗನನ್ನು ಹೊರಕ್ಕೆ ಕರತಂದು ಅವನ ತಲೆಯ ಮೇಲೆ ಕಿರೀಟ ವನ್ನಿಟ್ಟು ಸಾಕ್ಷಿಯನ್ನು ಕೊಟ್ಟು ಅವನನ್ನು ಅರಸನನ್ನಾಗಿ ಮಾಡಿದರು. ಯೆಹೋಯಾದನೂ ಅವನ ಮಕ್ಕಳೂ ಅವನನ್ನು ಅಭಿಷೇಕಿಸಿ--ದೇವರು ಅರಸನನ್ನು ರಕ್ಷಿಸಲಿ ಅಂದರು.

12ಆದರೆ ಓಡುತ್ತಾ ಅರಸನನ್ನು ಹರಸುತ್ತಿದ್ದ ಜನರ ಶಬ್ದವನ್ನು ಅತಲ್ಯಳು ಕೇಳಿದಾಗ ಅವಳು ಕರ್ತನ ಆಲಯದಲ್ಲಿ ಜನರ ಬಳಿಗೆ ಬಂದು ನೋಡಿದಳು.

Kannada Bible (Old Version), Bible Society of India.