18ಇದಲ್ಲದೆ ಫಿಲಿ ಷ್ಟಿಯರು ತಗ್ಗಿನ ದೇಶದ ಪಟ್ಟಣಗಳಲ್ಲಿಯೂ ಯೆಹೂ ದದ ದಕ್ಷಿಣ ಪಾರ್ಶ್ವದಲ್ಲಿಯೂ ಹೊಕ್ಕು ಬೇತ್ಷೆಮೆ ಷನ್ನೂ ಅಯ್ಯಾಲೋನನ್ನೂ ಗೆದೇರೋತನ್ನೂ ಸೋಕೋವನ್ನೂ ಅದರ ಗ್ರಾಮಗಳನ್ನೂ ತಿಮ್ನಾ ವನ್ನೂ ಅದರ ಗ್ರಾಮಗಳನ್ನೂ ಗಿಮ್ಜೋವನ್ನೂ ಅದರ ಗ್ರಾಮಗಳನ್ನೂ ತಕ್ಕೊಂಡು ಅಲ್ಲಿ ವಾಸವಾಗಿದ್ದರು.
19ಯಾಕಂದರೆ ಇಸ್ರಾಯೇಲಿನ ಅರಸನಾದ ಆಹಾ ಜನ ನಿಮಿತ್ತ ಕರ್ತನು ಯೆಹೂದವನ್ನು ತಗ್ಗಿಸಿದನು. ಅವನು ಯೆಹೂದವನ್ನು ಬೆತ್ತಲೆಯಾಗಿ ಮಾಡಿ ಕರ್ತ ನಿಗೆ ವಿರೋಧವಾಗಿ ಬಹಳ ಅಪರಾಧ ಮಾಡಿದನು.
20ಆಗ ಅಶ್ಶೂರಿನ ಅರಸನಾದ ತಿಗ್ಲತ್ಪಿಲೆಸರನು ಅವನ ಬಳಿಗೆ ಬಂದು ಅವನನ್ನು ಬಲಪಡಿಸದೆ ಬಾಧೆಪಡಿಸಿ ದನು.
21ಆಹಾಜನು ಕರ್ತನ ಮನೆಯಿಂದಲೂ ಅರಮನೆಯಿಂದಲೂ ಪ್ರಧಾನರಿಂದಲೂ ಒಂದು ಪಾಲನ್ನು ತೆಗೆದುಕೊಂಡು ಅಶ್ಶೂರಿನ ಅರಸನಿಗೆ ಕೊಟ್ಟನು; ಆದರೆ ಅವನು ಇವನಿಗೆ ಸಹಾಯ ಮಾಡದೆ ಹೋದನು.
22ಇದಲ್ಲದೆ ಅರಸನಾದ ಆಹಾಜನು ತನ್ನ ಇಕ್ಕಟ್ಟಿನ ಕಾಲದಲ್ಲಿ ಮತ್ತಷ್ಟು ಕರ್ತನಿಗೆ ವಿರೋಧ ವಾಗಿ ಅಪರಾಧ ಮಾಡಿದನು.