19ಯಾಕಂದರೆ ಇಸ್ರಾಯೇಲಿನ ಅರಸನಾದ ಆಹಾ ಜನ ನಿಮಿತ್ತ ಕರ್ತನು ಯೆಹೂದವನ್ನು ತಗ್ಗಿಸಿದನು. ಅವನು ಯೆಹೂದವನ್ನು ಬೆತ್ತಲೆಯಾಗಿ ಮಾಡಿ ಕರ್ತ ನಿಗೆ ವಿರೋಧವಾಗಿ ಬಹಳ ಅಪರಾಧ ಮಾಡಿದನು.
20ಆಗ ಅಶ್ಶೂರಿನ ಅರಸನಾದ ತಿಗ್ಲತ್ಪಿಲೆಸರನು ಅವನ ಬಳಿಗೆ ಬಂದು ಅವನನ್ನು ಬಲಪಡಿಸದೆ ಬಾಧೆಪಡಿಸಿ ದನು.
21ಆಹಾಜನು ಕರ್ತನ ಮನೆಯಿಂದಲೂ ಅರಮನೆಯಿಂದಲೂ ಪ್ರಧಾನರಿಂದಲೂ ಒಂದು ಪಾಲನ್ನು ತೆಗೆದುಕೊಂಡು ಅಶ್ಶೂರಿನ ಅರಸನಿಗೆ ಕೊಟ್ಟನು; ಆದರೆ ಅವನು ಇವನಿಗೆ ಸಹಾಯ ಮಾಡದೆ ಹೋದನು.
22ಇದಲ್ಲದೆ ಅರಸನಾದ ಆಹಾಜನು ತನ್ನ ಇಕ್ಕಟ್ಟಿನ ಕಾಲದಲ್ಲಿ ಮತ್ತಷ್ಟು ಕರ್ತನಿಗೆ ವಿರೋಧ ವಾಗಿ ಅಪರಾಧ ಮಾಡಿದನು.
23ಏನಂದರೆ, ಅವನು ಅರಾಮಿನ ಅರಸುಗಳ ದೇವರುಗಳು ಅವರಿಗೆ ಸಹಾಯ ಕೊಟ್ಟದ್ದರಿಂದ--ಅವು ನನಗೆ ಸಹಾಯ ಕೊಡುವ ಹಾಗೆ ನಾನು ಅವುಗಳಿಗೆ ಬಲಿಯನ್ನು ಅರ್ಪಿಸುತ್ತೇನೆ ಎಂದು ಅಂದುಕೊಂಡು ತನ್ನನ್ನು ಹೊಡೆದ ದಮಸ್ಕ ದವರ ದೇವರುಗಳಿಗೆ ಬಲಿಗಳನ್ನು ಅರ್ಪಿಸಿದನು. ಆದರೆ ಅವು ಅವನನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಬೀಳುವಂತೆ ಮಾಡಿದವು.