2 ರಾಜರು 10

ಉದಯ ಕಾಲದಲ್ಲಿ ಏನಾಯಿತೆಂದರೆ, ಅವನು ಹೊರಟು ನಿಂತು ಎಲ್ಲಾ ಜನರಿಗೆ ಹೇಳಿದ್ದೇನಂದರೆ -- ನೀವು ನೀತಿವಂತರು; ಇಗೋ, ನಾನು ನನ್ನ ಯಜಮಾನನ ಮೇಲೆ ಒಳಸಂಚು ಮಾಡಿ ಅವನನ್ನು ಕೊಂದುಹಾಕಿದೆನು.

2 Kings 10:9 (UKJV) And it came to pass in the morning, that he went out, and stood, and said to all the people, All of you be righteous: behold, I conspired against my master, and slew him: but who slew all these?

7ಈ ಪತ್ರವು ಅವರ ಬಳಿಗೆ ಬಂದಾಗ ಏನಾಯಿತಂದರೆ, ಅವರು ಅರಸನ ಮಕ್ಕಳನ್ನು ಹಿಡಿದು ಎಪ್ಪತ್ತು ಮಂದಿಯನ್ನು ಕೊಂದು ಅವರ ತಲೆಗಳನ್ನು ಪುಟ್ಟಿಗಳಲ್ಲಿಟ್ಟು ಇಜ್ರೇಲಿನಲ್ಲಿದ್ದ ಯೇಹುವಿನ ಬಳಿಗೆ ಕಳುಹಿಸಿದರು.

8ಆಗ ಆ ಸೇವಕರು ಬಂದು ಅವನಿಗೆಅರಸನ ಮಕ್ಕಳ ತಲೆಗಳನ್ನು ತೆಗೆದುಕೊಂಡು ಬಂದಿ ದ್ದಾರೆಂದು ತಿಳಿಸಿದರು. ಅದಕ್ಕವನು--ಉದಯ ಕಾಲದ ವರೆಗೂ ಅವುಗಳನ್ನು ಹೆಬ್ಬಾಗಿಲಿನ ದ್ವಾರದಲ್ಲಿ ಎರಡು ಕುಪ್ಪೆಗಳಾಗಿ ಹಾಕಿರಿ ಅಂದನು.

9ಉದಯ ಕಾಲದಲ್ಲಿ ಏನಾಯಿತೆಂದರೆ, ಅವನು ಹೊರಟು ನಿಂತು ಎಲ್ಲಾ ಜನರಿಗೆ ಹೇಳಿದ್ದೇನಂದರೆ -- ನೀವು ನೀತಿವಂತರು; ಇಗೋ, ನಾನು ನನ್ನ ಯಜಮಾನನ ಮೇಲೆ ಒಳಸಂಚು ಮಾಡಿ ಅವನನ್ನು ಕೊಂದುಹಾಕಿದೆನು.

10ಆದರೆ ಇವರೆಲ್ಲರನ್ನು ಸಂಹರಿಸಿದವರಾರು? ಕರ್ತನು ಅಹಾ ಬನ ಮನೆಯನ್ನು ಕುರಿತು ಹೇಳಿದ ಕರ್ತನ ಮಾತು ಗಳಲ್ಲಿ ಒಂದೂ ವ್ಯರ್ಥವಾಗುವದಿಲ್ಲವೆಂದು ನೀವು ತಿಳಿದುಕೊಳ್ಳಿರಿ. ಕರ್ತನು ತನ್ನ ಸೇವಕನಾದ ಎಲೀಯನ ಮುಖಾಂತರ ಹೇಳಿದ್ದನ್ನು ನೆರವೇರಿಸಿದ್ದಾನೆ ಅಂದನು.

11ಈ ಪ್ರಕಾರ ಯೇಹುವು ಅಹಾಬನಿಗೆ ಯಾರನ್ನೂ ಉಳಿಯಗೊಡಿಸದೆ ಇರುವ ವರೆಗೂ ಇಜ್ರೇಲಿನಲ್ಲಿ ಅವನಿಗೆ ಉಳಿದ ಎಲ್ಲಾ ಮನೆಯವರನ್ನೂ ಅವನ ಎಲ್ಲಾ ಹಿರಿಯರನ್ನೂ ನೆಂಟರನ್ನೂ ಯಾಜಕರನ್ನೂ ಸಂಹರಿಸಿದನು.

Kannada Bible (Old Version), Bible Society of India.