10ಪರಿಶುದ್ಧ ಸ್ಥಳದಿಂದ ತೊಲಗಿದ ದುಷ್ಟರು ಹೂಣ ಲ್ಪಡುವದನ್ನೂ ನಾನು ನೋಡಿದ್ದೇನೆ; ಅವರು ಹೀಗೆ ಮಾಡಿದ ಪಟ್ಟಣವನ್ನೇ ಮರೆತರು; ಇದೂ ಸಹ ನಿರರ್ಥಕವಾದದ್ದು;
11ದುಷ್ಟ ಕೆಲಸಕ್ಕೆ ದಂಡನೆಯು ಕೂಡಲೇ ಆಗದಿರುವದರಿಂದ ಮನುಷ್ಯಪುತ್ರರ ಹೃದ ಯವು ಅವರನ್ನು ಕೆಟ್ಟದ್ದನ್ನು ಮಾಡುವದರಲ್ಲಿಯೇ ತುಂಬಿಸುವದು.
12ಪಾಪಿಯು ನೂರು ಸಾರಿ ಕೆಟ್ಟದ್ದನ್ನು ಮಾಡಿ ದಿವಸಗಳನ್ನು ಹೆಚ್ಚಿಸಿದರೂ ದೇವರಿಗೆ ಭಯ ಪಟ್ಟು ಆತನಲ್ಲಿ ಭಯಪಡುವವರಿಗೆ ಒಳ್ಳೇದಾಗುವ ದೆಂದು ನಾನು ನಿಶ್ಚಯವಾಗಿಯೂ ಬಲ್ಲೆನು.
13ಆದರೆ ದುಷ್ಟನಿಗೆ ಒಳ್ಳೆಯದಾಗುವದಿಲ್ಲ. ತನ್ನ ನೆರಳಿನ ಹಾಗಿ ರುವ ಅವನ ದಿವಸಗಳನ್ನು ಹೆಚ್ಚಿಸುವದಿಲ್ಲ; ಅವನು ದೇವರ ಮುಂದೆ ಭಯಪಡುವದಿಲ್ಲ.
14ಭೂಮಿಯ ಮೇಲೆ ಮಾಡುವ ಒಂದು ವ್ಯರ್ಥವಾದದ್ದಿದೆ; ದುಷ್ಟರ ಕೆಲಸದ ಪ್ರಕಾರ ಅನುಭವಿಸುವ ನೀತಿವಂತರಿದ್ದಾರೆ; ನೀತಿವಂತರ ಕೆಲಸದ ಪ್ರಕಾರ ಅನುಭವಿಸುವ ದುಷ್ಟರಿ ದ್ದಾರೆ. ಇದೂ ಸಹ ವ್ಯರ್ಥವೆಂದು ನಾನು ಹೇಳಿದೆನು.