22ಎಫೋದಿನ ನಿಲುವಂಗಿಗಳನ್ನೆಲ್ಲಾ ನೇತ ಕೆಲಸ ಕ್ಕನುಸಾರ ನೀಲಿಯಿಂದ ಮಾಡಿದರು.
23ನಿಲುವಂಗಿಯ ರಂಧ್ರ ಕವಚ ರಂಧ್ರದ ಹಾಗೆ ಅದರ ಮಧ್ಯದಲ್ಲಿ ಇತ್ತು. ಅದು ಹರಿಯದ ಹಾಗೆ ಆ ರಂಧ್ರದ ಸುತ್ತಲೂ ಗೋಟು ಇತ್ತು.
24ನಿಲುವಂಗಿಯ ಅಂಚಿನ ಮೇಲೆ ಹೊಸೆದ ನೀಲಿ ಧೂಮ್ರ ರಕ್ತವರ್ಣದ ದಾಳಿಂಬರ ಗಳನ್ನು ಮಾಡಿದನು.
25ಶುದ್ಧ ಬಂಗಾರದ ಗಂಟೆಗಳನ್ನು ಮಾಡಿ ಆ ಗಂಟೆಗಳನ್ನು ದಾಳಿಂಬರಗಳ ನಡುವೆ ಇಟ್ಟು ನಿಲುವಂಗಿಗಳ ಅಂಚಿನ ಮೇಲೆ ಸುತ್ತಲೂ ದಾಳಿಂಬರಗಳ ನಡುವೆಯೇ ಇರಿಸಿದನು.
26ಸೇವೆ ಗೋಸ್ಕರ ಮಾಡಿದ ನಿಲುವಂಗಿಯ ಅಂಚಿನ ಮೇಲೆ ಸುತ್ತಲೂ ಒಂದು ಗಂಟೆ ಒಂದು ದಾಳಿಂಬರದ ಮೇರೆಗೆ ಇಟ್ಟರು, ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅದು ಇತ್ತು.