ಯೆಹೆಜೆಕೇಲ್ 31

ಮನುಷ್ಯಪುತ್ರನೇ, ಐಗುಪ್ತದ ಅರಸನಾದ ಫರೋಹನೊಂದಿಗೆ ಮತ್ತು ಅವನ ಸಮೂಹದೊಂದಿಗೆ ಮಾತ ನಾಡಿ--ನೀನು ನಿನ್ನ ದೊಡ್ಡಸ್ತಿಕೆಯಲ್ಲಿ ಯಾರಿಗೆ ಸಮಾನನಾಗಿರುವೆ?

Ezekiel 31:2 (UKJV) Son of man, speak unto Pharaoh king of Egypt, and to his multitude; Whom are you like in your greatness?

11 ಹನ್ನೊಂದನೇ ವರುಷದಲ್ಲಿ ಮೂರನೇ ತಿಂಗಳಿನ, ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--

2ಮನುಷ್ಯಪುತ್ರನೇ, ಐಗುಪ್ತದ ಅರಸನಾದ ಫರೋಹನೊಂದಿಗೆ ಮತ್ತು ಅವನ ಸಮೂಹದೊಂದಿಗೆ ಮಾತ ನಾಡಿ--ನೀನು ನಿನ್ನ ದೊಡ್ಡಸ್ತಿಕೆಯಲ್ಲಿ ಯಾರಿಗೆ ಸಮಾನನಾಗಿರುವೆ?

3ಇಗೋ, ಅಶ್ಶೂರ್ಯವು ಲೆಬನೋನಿನ ಸುಂದರವಾದ ಕೊಂಬೆಗಳುಳ್ಳ ದೇವ ದಾರು ಆಗಿದೆ. ಅದರ ನೆರಳು ದಟ್ಟವಾಗಿದೆ, ಎತ್ತರವು ನೀಳವಾಗಿದೆ; ಅದರ ತುದಿಯು ದಟ್ಟವಾದ ಕೊಂಬೆಗಳ ಮಧ್ಯದಲ್ಲಿತ್ತು.

4ನೀರು ಅದನ್ನು ಬೆಳೆಸಿತು, ಅಗಾಧವು ತನ್ನ ನದಿಗಳನ್ನು ಅದರ ಸುತ್ತಲೂ ಹರಿಸಿ ತನ್ನ ಕಾಲುವೆಗಳನ್ನು ಬಯಲಿನ ಮರಗಳಿಗೆಲ್ಲಾ ಕಳುಹಿಸಿ, ಅದನ್ನು ಎತ್ತರವಾಗಿ ಬೆಳೆಯುವಂತೆ ಮಾಡಿತು.

Kannada Bible (Old Version), Bible Society of India.