20ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ ಮಹೋನ್ನತ ನಾದ ದೇವರು ಸ್ತುತಿಹೊಂದಲಿ ಅಂದನು. ಅಬ್ರಾ ಮನು ಅವನಿಗೆ ಎಲ್ಲಾದರಲ್ಲಿ ದಶಮಭಾಗವನ್ನು ಕೊಟ್ಟನು.
21ಸೊದೋಮಿನ ಅರಸನು ಅಬ್ರಾಮನಿಗೆ--ಮನುಷ್ಯರನ್ನು ನನಗೆ ಕೊಡು, ಸಂಪತ್ತನ್ನು ನೀನೇ ತಕ್ಕೋ ಅಂದನು.
22ಅದಕ್ಕೆ ಅಬ್ರಾಮನು ಸೊದೋ ಮಿನ ಅರಸನಿಗೆ--ನನ್ನ ಕೈಯನ್ನು ಆಕಾಶವನ್ನು ಭೂಮಿಯನ್ನು ಹೊಂದಿರುವ ಮಹೋನ್ನತ ದೇವರಾ ಗಿರುವ ಕರ್ತನ ಕಡೆಗೆ ಎತ್ತಿದ್ದೇನೆ;
23ನಿನ್ನವುಗಳಲ್ಲಿ ನೂಲು ಮೊದಲುಗೊಂಡು ಕೆರದ ಬಾರನ್ನು ಸಹ ನಾನು ತಕ್ಕೊಳ್ಳುವದಿಲ್ಲ. ಯಾಕಂದರೆ--ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದ್ದೇನೆ ಎಂದು ನೀನು ಹೇಳಬಾರದು.
24ಯೌವನಸ್ಥರು ಊಟಮಾಡಿದ್ದು, ನನ್ನ ಸಂಗಡ ಹೋದ ಆನೇರ ಎಷ್ಕೋಲ ಮಮ್ರೆ ಎಂಬ ಈ ಮನುಷ್ಯರ ಪಾಲು ಮಾತ್ರ ಇರಲಿ; ಇವರು ತಮ್ಮ ಪಾಲನ್ನು ತಕ್ಕೊಳ್ಳಲಿ ಅಂದನು.