ಯೆಶಾಯ 56

ಕರ್ತನು ಹೀಗನ್ನುತ್ತಾನೆ--ನ್ಯಾಯವನ್ನು ಕೈಕೊಳ್ಳಿರಿ, ನೀತಿಯಲ್ಲಿ ನಡೆಯಿರಿ; ಯಾಕಂದರೆ ನನ್ನ ರಕ್ಷಣೆಯು ಬರುವದಕ್ಕೂ ನನ್ನ ನೀತಿಯು ಪ್ರಕಟವಾಗುವದಕ್ಕೂ ಸವಿಾಪವಾಗಿದೆ.

Isaiah 56:1 (UKJV) Thus says the LORD, Keep all of you judgment, and do justice: for my salvation is near to come, and my righteousness to be revealed.

1ಕರ್ತನು ಹೀಗನ್ನುತ್ತಾನೆ--ನ್ಯಾಯವನ್ನು ಕೈಕೊಳ್ಳಿರಿ, ನೀತಿಯಲ್ಲಿ ನಡೆಯಿರಿ; ಯಾಕಂದರೆ ನನ್ನ ರಕ್ಷಣೆಯು ಬರುವದಕ್ಕೂ ನನ್ನ ನೀತಿಯು ಪ್ರಕಟವಾಗುವದಕ್ಕೂ ಸವಿಾಪವಾಗಿದೆ.

2ಇದನ್ನು ಮಾಡುವ ಮನುಷ್ಯನೂ ಇದನ್ನು ಹಿಡಿದು ಕೊಳ್ಳುವವರ ಪುತ್ರನೂ ಅಂದರೆ ಸಬ್ಬತ್‌ ದಿನವನ್ನು ಅಪವಿತ್ರಮಾಡದೆ ಕೈಕೊಳ್ಳುವನೋ ಯಾವ ಕೇಡನ್ನು ಮಾಡದ ಹಾಗೆ ತನ್ನ ಕೈಯನ್ನು ಕಾಯುವನೋ ಅವನು ಧನ್ಯನು.

3ಇಲ್ಲವೆ ಕರ್ತನೊಂದಿಗೆ ಅನ್ಯನ ಮಗನು ಸೇರಿಕೊಂಡು--ಕರ್ತನು ತನ್ನ ಜನರಿಂದ ನನ್ನನ್ನು ಸಂಪೂರ್ಣವಾಗಿ ಅಗಲಿಸುವನು ಎಂದು ಮಾತಾಡ ದಿರಲಿ; ಅಥವಾ ನಪುಂಸಕನು--ಇಗೋ, ನಾನು ಒಣಗಿದ ಮರವೆಂದು ಹೇಳದಿರಲಿ.

Kannada Bible (Old Version), Bible Society of India.