1ನನ್ನ ಹುಲ್ಲುಗಾವಲಿನ ಕುರಿಗಳನ್ನು ಹಾಳು ಮಾಡಿ ಚದರಿಸುವ ಕುರುಬರಿಗೆ ಅಯ್ಯೋ, ಎಂದು ಕರ್ತನು ಅನ್ನುತ್ತಾನೆ.
2ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ನನ್ನ ಜನರನ್ನು ಮೇಯಿಸುವ ಕುರುಬರಿಗೆ ವಿರೋಧ ವಾಗಿ ಹೀಗೆ ಹೇಳುತ್ತಾನೆ--ನೀವು ನನ್ನ ಮಂದೆಯನ್ನು ಚದರಿಸಿ ಓಡಿಸಿಬಿಟ್ಟು ವಿಚಾರಿಸದೆ ಇದ್ದೀರಿ; ಇಗೋ, ನಾನು ನಿಮ್ಮ ಕ್ರಿಯೆಗಳ ಕೆಟ್ಟತನವನ್ನು ನಿಮ್ಮಲ್ಲಿ ವಿಚಾರಿಸುತ್ತೇನೆಂದು ಕರ್ತನು ಅನ್ನುತ್ತಾನೆ.
3ನಾನು ನನ್ನ ಮಂದೆಯ ಶೇಷವನ್ನು, ಅವರನ್ನು ಓಡಿಸಿಬಿಟ್ಟ ಎಲ್ಲಾ ದೇಶಗಳಿಂದ ಕೂಡಿಸಿ ತಮ್ಮ ಹಟ್ಟಿಗಳಿಗೆ ತಿರುಗಿ ತರುವೆನು; ಅವರು ಫಲಕಾರಿಯಾಗಿ ಹೆಚ್ಚುವರು.