13ಆಗ ಕನ್ಯಾಸ್ತ್ರೀಯೂ ಪ್ರಾಯದವರೂ ಮುದುಕರ ಸಹಿತವಾಗಿ ನಾಟ್ಯದಲ್ಲಿ ಸಂತೋಷಪಡುವರು, ಯಾಕಂ ದರೆ ಅವರ ದುಃಖವನ್ನು ಆನಂದಕ್ಕೆ ಬದಲಾಯಿಸು ವೆನು; ಅವರನ್ನು ಆದರಿಸಿ ದುಃಖದಿಂದ ಬಿಡಿಸಿ ಅವ ರಿಗೆ ಸಂತೋಷವನ್ನುಂಟು ಮಾಡುವೆನು.
14ಇದಲ್ಲದೆ ಯಾಜಕರ ಪ್ರಾಣವನ್ನು ಕೊಬ್ಬಿನಿಂದ ತುಂಬಿಸುವೆನು; ನನ್ನ ಜನರು ನನ್ನ ಒಳ್ಳೇತನದಿಂದ ತೃಪ್ತಿಪಡುವರೆಂದು ಕರ್ತನು ಅನ್ನುತ್ತಾನೆ.
15ಕರ್ತನು ಹೀಗೆ ಹೇಳುತ್ತಾನೆ; ರಾಮದಲ್ಲಿ ಸ್ವರವೂ ಗೋಳಾಟವೂ ಅಘೋರವಾದ ಅಳುವಿಕೆಯೂ ಕೇಳಲ್ಪ ಟ್ಟಿತು; ರಾಹೇಲಳು ತನ್ನ ಮಕ್ಕಳಿಲ್ಲದ್ದರಿಂದ ಆದರಣೆ ಹೊಂದಲೊಲ್ಲದೆ ಅಳುತ್ತಾಳೆ;
16ಕರ್ತನು ಹೀಗೆ ಹೇಳು ತ್ತಾನೆ--ನಿನ್ನ ಸ್ವರವನ್ನು ಅಳದ ಹಾಗೆಯೂ ಕಣ್ಣುಗಳು ಕಣ್ಣೀರು ಇಡದ ಹಾಗೆಯೂ ಬಿಗಿ ಹಿಡಿ; ನಿನ್ನ ಕೆಲಸಕ್ಕೆ ಪ್ರತಿಫಲ ಉಂಟೆಂದು ಕರ್ತನು ಅನ್ನುತ್ತಾನೆ; ಅವರು ಶತ್ರುವಿನ ದೇಶದಿಂದ ತಿರುಗಿ ಬರುವರು.
17ನಿನ್ನ ಅಂತ್ಯದಲ್ಲಿ ನಿರೀಕ್ಷೆ ಉಂಟೆಂದು ಕರ್ತನು ಅನ್ನುತ್ತಾನೆ; ನಿನ್ನ ಮಕ್ಕಳು ತಮ್ಮ ಮೇರೆಗೆ ತಿರುಗಿ ಬರುವರು.