20ಗರ್ಭವು ಅವನನ್ನು ಮರೆತುಬಿಡುವದು; ಹುಳವು ಅವನಲ್ಲಿ ಸವಿ ಊಟ ಹೊಂದುವದು; ಇನ್ನು ಅವನ ನೆನಪು ಇರುವದಿಲ್ಲ; ಮರದ ಹಾಗೆ ಅನ್ಯಾಯವು ಮುರಿಯಲ್ಪಡುವದು.
21ಹೆರದ ಬಂಜೆಯನ್ನು ಅವನು ಉಪದ್ರವಪಡಿಸಿ ದನು; ವಿಧವೆಗೆ ಉಪಕಾರಮಾಡಲಿಲ್ಲ.
22ಬಲಿಷ್ಠರನ್ನು ತನ್ನ ಶಕ್ತಿಯಿಂದ ಎಳೆಯುತ್ತಾನೆ. ಅವನು ಎದ್ದರೆ ಅವನ ಜೀವದಲ್ಲಿ ಯಾವ ಮನುಷ್ಯನಿಗೂ ನಂಬಿಕೆ ಇಲ್ಲ.
23ಅವನನ್ನು ಭದ್ರಪಡಿಸುತ್ತಾನೆ; ಅವನು ವಿಶ್ರಾಂತಿ ತೆಗೆದುಕೊಳ್ಳುತ್ತಾನೆ; ಆದಾಗ್ಯೂ ಆತನ ಕಣ್ಣುಗಳು ಅವರ ಮಾರ್ಗಗಳ ಮೇಲೆ ಅವೆ.
24ಸ್ವಲ್ಪಕಾಲ ಅವರು ಉನ್ನತವಾಗಿದ್ದು ಇಲ್ಲದೆ ಹೋಗುತ್ತಾರೆ; ಅವರು ಕುಗ್ಗಿ ಹೋಗುತ್ತಾರೆ; ಎಲ್ಲರ ಹಾಗೆ ಅವರು ಮಾರ್ಗದಿಂದ ತೆಗೆದುಹಾಕಲ್ಪಡುತ್ತಾರೆ; ಅವರು ತೆನೆಗಳ ತಲೆಯಂತೆ ಕೊಯ್ಯಲ್ಪಡುತ್ತಾರೆ.