ಯೋಬು 34

ಆತನ ಕಣ್ಣುಗಳು ಮನುಷ್ಯನ ಮಾರ್ಗಗಳ ಮೇಲೆ ಇರುತ್ತವೆ; ಅವನ ಹೋಗೋಣಗಳನ್ನೆಲ್ಲಾ ನೋಡುತ್ತಾನೆ.

Job 34:21 (UKJV) For his eyes are upon the ways of man, and he sees all his activities.

19ಆತನು ಪ್ರಧಾನರ ಮುಖದಾಕ್ಷಿಣ್ಯ ನೋಡು ವನೋ? ಧನಿಕನನ್ನು ಬಡವನಿಗಿಂತ ಹೆಚ್ಚೆಂದು ಲಕ್ಷಿ ಸುವನೋ? ಯಾಕಂದರೆ ಇಬ್ಬರೂ ಆತನ ಕೈ ಕೆಲಸ ವಾಗಿದ್ದಾರೆ.

20ಅವರು ಕ್ಷಣಮಾತ್ರದಲ್ಲಿ ಸಾಯುತ್ತಾರೆ; ಮಧ್ಯ ರಾತ್ರಿಯಲ್ಲಿ ಜನರು ಕಳವಳಗೊಂಡು ಗತಿಸಿ ಹೋಗುತ್ತಾರೆ; ಪರಾಕ್ರಮಿಗಳು ಕೈ ಸೋಕದೆ ತೆಗೆಯಲ್ಪಡುತ್ತಾರೆ.

21ಆತನ ಕಣ್ಣುಗಳು ಮನುಷ್ಯನ ಮಾರ್ಗಗಳ ಮೇಲೆ ಇರುತ್ತವೆ; ಅವನ ಹೋಗೋಣಗಳನ್ನೆಲ್ಲಾ ನೋಡುತ್ತಾನೆ.

22ದುಷ್ಟತನ ಮಾಡುವವರು ಅಡಗಿ ಕೊಳ್ಳುವ ಹಾಗೆ ಕತ್ತಲೂ ಇಲ್ಲ, ಮರಣದ ನೆರಳೂ ಇಲ್ಲ.

23ದೇವರ ಬಳಿಗೆ ನ್ಯಾಯಕ್ಕೆ ಬರುವ ಹಾಗೆ, ಮನುಷ್ಯನ ಮೇಲೆ ಆತನು ಹೆಚ್ಚು ಗಮನವಿಡುವದಿಲ್ಲ.

Kannada Bible (Old Version), Bible Society of India.