16ನಾನು ಬೇಸರಗೊಂಡಿದ್ದೇನೆ; ನಿತ್ಯವಾಗಿ ನಾನು ಬದುಕಲೊಲ್ಲೆನು; ನನ್ನನ್ನು ಬಿಟ್ಟು ಬಿಡು; ಯಾಕಂದರೆ ನನ್ನ ದಿವಸಗಳು ವ್ಯರ್ಥವಾಗಿವೆ.
17ನೀನು ಅವನನ್ನು ಹೆಚ್ಚಿಸುವ ಹಾಗೆಯೂ ಅವನ ಮೇಲೆ ನಿನ್ನ ಹೃದಯ ಇಡುವ ಹಾಗೆಯೂ
18ಅವನನ್ನು ಪ್ರತಿ ಉದಯದಲ್ಲಿ ದರ್ಶಿಸುವ ಹಾಗೆಯೂ ಕ್ಷಣ ಕ್ಷಣಕ್ಕೆ ಅವನನ್ನು ಪರೀಕ್ಷಿಸುವ ಹಾಗೆಯೂ ಮನುಷ್ಯನು ಎಷ್ಟರವನು?
19ಎಷ್ಟರ ವರೆಗೆ ನನ್ನ ಕಡೆಯಿಂದ ದೃಷ್ಟಿ ತೊಲಗಿಸುವದಿಲ್ಲ? ನಾನು ಉಗುಳು ನುಂಗುವ ದಕ್ಕೂ ನನ್ನನ್ನು ಬಿಡುವದಿಲ್ಲವೋ?
20ನಾನು ಪಾಪ ಮಾಡಿದ್ದೇನೆ; ಓ ಮನುಷ್ಯರನ್ನು ಕಾಯುವವನೇ, ನಾನು ನಿನಗೆ ಏನು ಮಾಡಲಿ? ನನಗೆ ನಾನೇ ಭಾರವಾಗುವ ಹಾಗೆ ನನ್ನನ್ನು ನಿನಗೆ ಗುರಿಯಾಗಿ ಇಟ್ಟು ಕೊಳ್ಳುವದು ಯಾಕೆ?