ಯೆಹೋಶುವ 19

ಅದಕ್ಕೆ ಉಮ್ಮಾ, ಅಫೇಕ್‌ ರೆಹೋಬ್‌ ಎಂಬ ಪಟ್ಟಣಗಳು ಸೇರಿದ್ದವು. ಇಪ್ಪತ್ತೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ.

Joshua 19:30 (UKJV) Ummah also, and Aphek, and Rehob: twenty and two cities with their villages.

28ಅಲ್ಲಿಂದ ಎಬ್ರೋನಿಗೂ ರೆಹೋಬಿನಿಗೂ ಹಮ್ಮೋನಿಗೂ ಕಾನಕ್ಕೂ ಮಹಾಚಿದೋನಿನ ವರೆಗೆ ಹಾದು

29ರಾಮಕ್ಕೆ ಹೋಗಿ ತೂರ್‌ ಎಂಬ ಬಲವಾದ ಪಟ್ಟಣದ ವರೆಗೂ ತಿರುಗಿ ಅಲ್ಲಿಂದ ಹೋಸಾಕ್ಕೆ ಹೊರಟು ಸಮುದ್ರದ ಬಳಿಯ ಅಕ್ಜೀಬಿನ ಮೇರೆಯ ಅಂಚಿಗೆ ಮುಗಿಯುವದು.

30ಅದಕ್ಕೆ ಉಮ್ಮಾ, ಅಫೇಕ್‌ ರೆಹೋಬ್‌ ಎಂಬ ಪಟ್ಟಣಗಳು ಸೇರಿದ್ದವು. ಇಪ್ಪತ್ತೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ.

31ಇದೇ ಆಶೇರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಈ ಪಟ್ಟಣಗಳೂ ಅವುಗಳ ಗ್ರಾಮಗಳೂ ಬಾಧ್ಯತೆಯಾಗಿದ್ದವು.

32ಆರನೇ ಚೀಟು ನಫ್ತಾಲಿಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಬಿತ್ತು.

Kannada Bible (Old Version), Bible Society of India.