ಸ್ತುತಿಗಳು 138

ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುವೆನು; ದೇವರುಗಳ ಮುಂದೆ ನಿನ್ನನ್ನು ಕೀರ್ತಿಸುವೆನು.

Psalm 138:1 (UKJV) I will praise you with my whole heart: before the gods will I sing praise unto you.

1ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುವೆನು; ದೇವರುಗಳ ಮುಂದೆ ನಿನ್ನನ್ನು ಕೀರ್ತಿಸುವೆನು.

2ನಿನ್ನ ಪರಿಶುದ್ಧ ಮಂದಿರದ ಕಡೆಗೆ ಅಡ್ಡ ಬಿದ್ದು ನಿನ್ನ ಪ್ರೀತಿ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ನಿನ್ನ ಹೆಸರನ್ನು ಕೊಂಡಾಡುವೆನು; ನಿನ್ನ ವಾಕ್ಯವನ್ನು ನಿನ್ನ ಎಲ್ಲಾ ಹೆಸರಿಗಿಂತಲೂ ಮಿಗಿಲಾಗಿ ಘನಪಡಿಸಿದ್ದೀ.

3ನಾನು ಕೂಗಿಕೊಂಡ ದಿವಸದಲ್ಲಿ ನೀನು ನನಗೆ ಉತ್ತರ ಕೊಟ್ಟೆ; ನನ್ನ ಪ್ರಾಣವನ್ನು ಬಲಪಡಿಸಿದ್ದೀ; ನನ್ನ ಪ್ರಾಣಕ್ಕೆ ಬಲವನ್ನು ಕೊಟ್ಟು ನನ್ನನ್ನು ಬಲಪಡಿಸಿದ್ದೀ.

Kannada Bible (Old Version), Bible Society of India.