1ನನ್ನ ನೀತಿಯಾದ ಓ ದೇವರೇ, ನಾನು ಮೊರೆಯಿಡಲು ನನಗೆ ಕಿವಿಗೊಡು, ಇಕ್ಕಟ್ಟಿನಲ್ಲಿ ನನಗೆ ವಿಶಾಲಮಾಡಿದಿ. ನನ್ನ ಮೇಲೆ ಕರುಣೆಯಿಟ್ಟು ನನ್ನ ಪ್ರಾರ್ಥನೆಯನ್ನು ಕೇಳು.
2ಓ ಮನುಷ್ಯರ ಪುತ್ರರೇ, ನನ್ನ ಘನವನ್ನು ಅವ ಮಾನಕ್ಕೆ ತಿರುಗಿಸುವದು ಎಷ್ಟರ ವರೆಗೆ? ನೀವು ವ್ಯರ್ಥವಾದದ್ದನ್ನು ಪ್ರೀತಿಮಾಡಿ ಸುಳ್ಳನ್ನು ಹುಡುಕು ವದು ಎಷ್ಟರ ವರೆಗೆ? ಸೆಲಾ.
3ಕರ್ತನು ತನ್ನ ಭಕ್ತನನ್ನು ತನಗಾಗಿ ಪ್ರತ್ಯೇಕಿಸಿದ್ದಾನೆಂದು ತಿಳಿದು ಕೊಳ್ಳಿರಿ. ನಾನು ಕರ್ತನನ್ನು ಮೊರೆಯಿಡಲು ಆತನು ಕೇಳುವನು.
4ಭಯಭಕ್ತಿಯಿಂದಿರ್ರಿ; ಪಾಪಮಾಡಬೇಡಿರಿ; ಹಾಸಿಗೆ ಗಳ ಮೇಲೆ ನಿಮ್ಮ ಸ್ವಂತ ಹೃದಯದಲ್ಲಿ ಮಾತನಾಡಿ ಮೌನವಾಗಿರ್ರಿ. ಸೆಲಾ.