ಸ್ತುತಿಗಳು 5

ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ; ಇಲ್ಲವೆ ಕೆಟ್ಟತನವು ನಿನ್ನ ಬಳಿಯಲ್ಲಿ ತಂಗಲಾರದು.

Psalm 5:4 (UKJV) For you are not a God that has pleasure in wickedness: neither shall evil dwell with you.

2ನನ್ನ ಅರಸನೇ, ನನ್ನ ದೇವರೇ, ನನ್ನ ಮೊರೆಯ ಶಬ್ದವನ್ನು ಆಲೈಸು; ನಿನ್ನನ್ನೇ ಪ್ರಾರ್ಥಿಸುತ್ತೇನೆ.

3ಓ ಕರ್ತನೇ, ಬೆಳಿಗ್ಗೆ ನನ್ನ ಸ್ವರವನ್ನು ಕೇಳುವಿ; ಹೊತ್ತಾರೆಯಲ್ಲಿ ನಿನಗೆ ಪ್ರಾರ್ಥಿಸಿ ಮೇಲಕ್ಕೆ ನೋಡುವೆನು.

4ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ; ಇಲ್ಲವೆ ಕೆಟ್ಟತನವು ನಿನ್ನ ಬಳಿಯಲ್ಲಿ ತಂಗಲಾರದು.

5ನಿನ್ನ ದೃಷ್ಟಿಯಲ್ಲಿ ಮೂರ್ಖರು ನಿಂತುಕೊಳ್ಳುವದಿಲ್ಲ. ದುಷ್ಟ ಕೆಲಸ ಮಾಡುವವರೆಲ್ಲರನ್ನು ನೀನು ಹಗೆ ಮಾಡುತ್ತೀ.

6ಸುಳ್ಳಾಡುವವರನ್ನು ನೀನು ನಾಶಮಾಡುತ್ತೀ; ಕೊಲೆಗಾರರನ್ನು ಮತ್ತು ಮೋಸಗಾರರನ್ನು ಕರ್ತನು ಅಸಹ್ಯಿಸುತ್ತಾನೆ.

Kannada Bible (Old Version), Bible Society of India.