ಸ್ತುತಿಗಳು 9

ಆದರೆ ಕರ್ತನು ಸದಾ ಇರುವಾತನು; ಆತನು ನ್ಯಾಯಕ್ಕಾಗಿ ತನ್ನ ಸಿಂಹಾಸನವನ್ನು ಸಿದ್ಧಮಾಡಿದ್ದಾನೆ.

Psalm 9:7 (UKJV) But the LORD shall endure for ever: he has prepared his throne for judgment.

5ನೀನು ಜನಾಂಗಗಳನ್ನು ಗದರಿಸಿ ದುಷ್ಟರನ್ನು ನಾಶ ಮಾಡಿದ್ದೀ; ಅವರ ಹೆಸರನ್ನು ಯುಗ ಯುಗಾಂತರ ಗಳ ವರೆಗೂ ಅಳಿಸಿ ಬಿಟ್ಟಿದ್ದೀ.

6ಓ ಶತ್ರುವೇ, ನಾಶನ ಗಳು ಸದಾಕಾಲಕ್ಕೆ ಮುಗಿದಿವೆ; ನೀನು ಪಟ್ಟಣಗಳನ್ನು ನಾಶಮಾಡಿದ್ದೀ; ಅವರ ಜ್ಞಾಪಕವು ಅವರೊಂದಿಗೆ ನಾಶವಾಯಿತು.

7ಆದರೆ ಕರ್ತನು ಸದಾ ಇರುವಾತನು; ಆತನು ನ್ಯಾಯಕ್ಕಾಗಿ ತನ್ನ ಸಿಂಹಾಸನವನ್ನು ಸಿದ್ಧಮಾಡಿದ್ದಾನೆ.

8ಆತನೇ ನೀತಿಯಿಂದ ಲೋಕಕ್ಕೆ ನ್ಯಾಯತೀರಿಸುವನು; ಆತನು ಪ್ರಜೆಗಳಿಗೆ ಯಥಾರ್ಥವಾಗಿ ನ್ಯಾಯತೀರ್ಪು ಕೊಡುವನು.

9ಕರ್ತನು ಕುಗ್ಗಿದವರಿಗೆ ಆಶ್ರಯವಾಗಿರುವನು, ಇಕ್ಕಟ್ಟಿನ ಸಮಯದಲ್ಲಿ ಸಹ ಆಶ್ರಯವಾಗಿರುವನು.

Kannada Bible (Old Version), Bible Society of India.