2 ರಾಜರು 5

ಅರಾಮ್ಯರು ಗುಂಪುಗುಂಪಾಗಿ ಹೊರಟು ಇಸ್ರಾಯೇಲ್‌ ದೇಶದಿಂದ ಒಬ್ಬ ಹುಡುಗಿಯನ್ನು ಸೆರೆಯಾಗಿ ಹಿಡುಕೊಂಡು ಬಂದರು. ಅವಳು ನಾಮಾ ನನ ಹೆಂಡತಿಗೆ ಸೇವಕಳಾಗಿದ್ದಳು.

2 Kings 5:2 (UKJV) And the Syrians had gone out by companies, and had brought away captive out of the land of Israel a little maid; and she waited on Naaman's wife.

1ಅರಾಮ್ಯರ ಅರಸನ ಸೈನ್ಯಾಧಿಪತಿಯಾದ ನಾಮಾನನು ತನ್ನ ಯಜಮಾನನ ಮುಂದೆ ದೊಡ್ಡವನಾಗಿಯೂ ಘನವುಳ್ಳವನಾಗಿಯೂ ಇದ್ದನು. ಕರ್ತನು ಅವನಿಂದ ಅರಾಮ್ಯರಿಗೆ ಬಿಡುಗಡೆಯನ್ನು ಉಂಟುಮಾಡಿದ್ದನು; ಇದಲ್ಲದೆ ಅವನು ಪರಾಕ್ರಮ ಶಾಲಿಯಾಗಿದ್ದನು. ಆದರೆ ಅವನು ಕುಷ್ಠರೋಗಿಯಾ ಗಿದ್ದನು.

2ಅರಾಮ್ಯರು ಗುಂಪುಗುಂಪಾಗಿ ಹೊರಟು ಇಸ್ರಾಯೇಲ್‌ ದೇಶದಿಂದ ಒಬ್ಬ ಹುಡುಗಿಯನ್ನು ಸೆರೆಯಾಗಿ ಹಿಡುಕೊಂಡು ಬಂದರು. ಅವಳು ನಾಮಾ ನನ ಹೆಂಡತಿಗೆ ಸೇವಕಳಾಗಿದ್ದಳು.

3ಅವಳು ತನ್ನ ಯಜಮಾನಿಗೆ--ನನ್ನ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಬಳಿಯಲ್ಲಿರುತ್ತಿದ್ದರೆ ಅವನು ಇವನ ಕುಷ್ಠರೋಗವನ್ನು ವಾಸಿಮಾಡುತ್ತಿದ್ದನು ಅಂದಳು.

4ಆಗ ಒಬ್ಬನು ಹೋಗಿ ಇಸ್ರಾಯೇಲ್‌ ದೇಶದ ಹುಡುಗಿಯು ಹೇಳಿದ್ದನ್ನು ತನ್ನ ಯಜಮಾನನಿಗೆ ತಿಳಿಸಿದನು.

Kannada Bible (Old Version), Bible Society of India.