2 ರಾಜರು 5

ಆಗ ಒಬ್ಬನು ಹೋಗಿ ಇಸ್ರಾಯೇಲ್‌ ದೇಶದ ಹುಡುಗಿಯು ಹೇಳಿದ್ದನ್ನು ತನ್ನ ಯಜಮಾನನಿಗೆ ತಿಳಿಸಿದನು.

2 Kings 5:4 (UKJV) And one went in, and told his lord, saying, Thus and thus said the maid that is of the land of Israel.

2ಅರಾಮ್ಯರು ಗುಂಪುಗುಂಪಾಗಿ ಹೊರಟು ಇಸ್ರಾಯೇಲ್‌ ದೇಶದಿಂದ ಒಬ್ಬ ಹುಡುಗಿಯನ್ನು ಸೆರೆಯಾಗಿ ಹಿಡುಕೊಂಡು ಬಂದರು. ಅವಳು ನಾಮಾ ನನ ಹೆಂಡತಿಗೆ ಸೇವಕಳಾಗಿದ್ದಳು.

3ಅವಳು ತನ್ನ ಯಜಮಾನಿಗೆ--ನನ್ನ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಬಳಿಯಲ್ಲಿರುತ್ತಿದ್ದರೆ ಅವನು ಇವನ ಕುಷ್ಠರೋಗವನ್ನು ವಾಸಿಮಾಡುತ್ತಿದ್ದನು ಅಂದಳು.

4ಆಗ ಒಬ್ಬನು ಹೋಗಿ ಇಸ್ರಾಯೇಲ್‌ ದೇಶದ ಹುಡುಗಿಯು ಹೇಳಿದ್ದನ್ನು ತನ್ನ ಯಜಮಾನನಿಗೆ ತಿಳಿಸಿದನು.

5ಆದದರಿಂದ ಅರಾಮ್ಯರ ಅರಸನು--ನೀನು ಹೋಗಿ ಬಾ; ನಾನು ಇಸ್ರಾಯೇಲಿನ ಅರಸನಿಗೆ ಪತ್ರವನ್ನು ಕಳುಹಿಸುವೆನು ಅಂದನು. ಹಾಗೆಯೇ ಅವನು ಹತ್ತು ತಲಾಂತು ಬೆಳ್ಳಿಯನ್ನೂ ಆರು ಸಾವಿರ ಬಂಗಾರದ ನಾಣ್ಯಗಳನ್ನೂ ಹತ್ತು ದುಸ್ತು ಬಟ್ಟೆ ಗಳನ್ನೂ ತೆಗೆದುಕೊಂಡು ಹೋದನು.

6ಅವನು ಇಸ್ರಾಯೇಲಿನ ಅರಸನ ಬಳಿಗೆ ಆ ಪತ್ರವನ್ನು ತೆಗೆದು ಕೊಂಡು ಬಂದನು. ಅದರಲ್ಲಿ--ಈ ಪತ್ರ ನಿನಗೆ ಸೇರುವಾಗ ಇಗೋ, ನೀನು ನನ್ನ ಸೇವಕನಾದ ನಾಮಾ ನನಿಗಿರುವ ಕುಷ್ಠರೋಗವನ್ನು ವಾಸಿಮಾಡುವ ಹಾಗೆ ಅವನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ ಎಂಬದು.

Kannada Bible (Old Version), Bible Society of India.