15ಶರೀರಗಳೆಲ್ಲಾ ಒಟ್ಟಾಗಿ ನಾಶವಾಗು ವವು. ಮತ್ತು ಮನುಷ್ಯನು ದೂಳಿಗೆ ತಿರುಗುವನು.
16ಗ್ರಹಿಕೆ ಇದ್ದರೆ ಇದನ್ನು ಕೇಳು; ನನ್ನ ನುಡಿಗಳ ಶಬ್ದಕ್ಕೆ ಕಿವಿಗೊಡು.
17ನ್ಯಾಯವನ್ನು ಹಗೆಮಾಡುವ ವನು ಆಳುವನೋ? ಘನವಾದ ನೀತಿವಂತನನ್ನು ನೀನು ಖಂಡಿಸುತ್ತೀಯೋ?
18ಅರಸನಿಗೆ ದುಷ್ಟನೆಂದೂ ಪ್ರಧಾನರಿಗೆ ಬಲಹೀನರೆಂದೂ ಹೇಳುವದುಂಟೋ?
19ಆತನು ಪ್ರಧಾನರ ಮುಖದಾಕ್ಷಿಣ್ಯ ನೋಡು ವನೋ? ಧನಿಕನನ್ನು ಬಡವನಿಗಿಂತ ಹೆಚ್ಚೆಂದು ಲಕ್ಷಿ ಸುವನೋ? ಯಾಕಂದರೆ ಇಬ್ಬರೂ ಆತನ ಕೈ ಕೆಲಸ ವಾಗಿದ್ದಾರೆ.