ಸ್ತುತಿಗಳು 119

ನಿನ್ನ ಹೆದರಿಕೆಯಿಂದ ನನ್ನ ಶರೀರವು ನಡುಗುತ್ತದೆ. ನಾನು ನಿನ್ನ ತೀರ್ಪುಗಳಿಗೆ ಭಯಪಡುತ್ತೇನೆ.

Psalm 119:120 (UKJV) My flesh trembles for fear of you; and I am afraid of your judgments.

118ನಿನ್ನ ನಿಯಮಗಳಿಂದ ತಪ್ಪಿದವರೆಲ್ಲರನ್ನು ನೀನು ತುಳಿದುಬಿಟ್ಟಿದ್ದೀ; ಅವರಲ್ಲಿ ಮೋಸವೂ ಸುಳ್ಳೂ ಇತ್ತು.

119ಕಿಟ್ಟದ ಹಾಗೆ ಭೂಮಿ ಯಲ್ಲಿರುವ ದುಷ್ಟರೆಲ್ಲರನ್ನು ತೆಗೆದುಹಾಕುತ್ತೀ, ಆದದ ರಿಂದ ನಿನ್ನ ವಿಧಿಗಳನ್ನು ಪ್ರೀತಿ ಮಾಡುತ್ತೇನೆ.

120ನಿನ್ನ ಹೆದರಿಕೆಯಿಂದ ನನ್ನ ಶರೀರವು ನಡುಗುತ್ತದೆ. ನಾನು ನಿನ್ನ ತೀರ್ಪುಗಳಿಗೆ ಭಯಪಡುತ್ತೇನೆ.

121ನ್ಯಾಯವನ್ನೂ ನೀತಿಯನ್ನೂ ಮಾಡಿದ್ದೇನೆ;ನನ್ನ ಹಿಂಸಕರಿಗೆ ನನ್ನನ್ನು ಒಪ್ಪಿಸಿಬಿಡಬೇಡ.

122ಒಳ್ಳೇದಕ್ಕಾಗಿ ನಿನ್ನ ಸೇವಕನಿಗೆ ಹೊಣೆಯಾಗು; ಅಹಂಕಾರಿಗಳು ನನಗೆ ಹಿಂಸೆ ಮಾಡದಿರಲಿ.

Kannada Bible (Old Version), Bible Society of India.